ಮದುವೆ ಎಂಬುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ನಂಬಿಕೆ ನಮ್ಮದು. ಅಂದರೆ ಸ್ವರ್ಗದಲ್ಲಿ ನಿಶ್ಚಯ ವಾಗುವ ಬಾಳಸಂಗಾತಿಯನ್ನು ಹುಡುಕುವುದು ತುಸು ಕಷ್ಟಕರ. ಇದಕ್ಕೊಂದು ಮಾಧ್ಯಮವಿದ್ದರೆ ಒಳಿತು ಎಂಬುವುದು ಸಮಾಜ ಬಾಂಧವರ ಅಭಿಪ್ರಾಯ.
ಈ ನಿಟ್ಟಿನಲ್ಲಿ ಒಕ್ಕಲಿಗ ಗೌಡ ಸಮುದಾಯದ ವಿವಾಹ ಆಕಾಂಕ್ಷಿ ವಧು ವರರಿಗೆ ಅನುರೂಪವಾದ ಸಂಗಾತಿಯ ಅನ್ವೇಷಣೆಗೆ ದಾರಿ ಸುಗಮವಾಗಿಸುವ ದೃಷ್ಟಿಯಿಂದ ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್ (ರಿ) , ಪುತ್ತೂರು ವತಿಯಿಂದ ದಿನಾಂಕ 02 /09 /2022 ರಂದು ಆರಂಭಗೊಂಡಿರುತ್ತದೆ . ಒಕ್ಕಲಿಗ ವಿವಾಹ ವೇದಿಕೆಯಲ್ಲಿ ಪ್ರಸ್ತುತವಾಗಿ 593 ನೋಂದಾವಣೆ ಆಗಿದ್ದು ಇದರಲ್ಲಿ 126 ಜೋಡಿಗಳನ್ನು ಮದುವೆ ಮುಖಾಂತರ ಒಂದುಗೂಡಿಸಿರುವ ಹೆಮ್ಮೆ ನಮ್ಮದಾಗಿದೆ. ಇನ್ನು ಮದುವೆ ಆಗಲು ನಿಶ್ವಯವಾಗಿರುವ 13 ಜೋಡಿಗಳಿಗೆ ಶುಭ ಹಾರೈಸುತ್ತಾ ನಮ್ಮ ವಿವಾಹ ವೇದಿಕೆಯಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣೆ ಮಾಡಿಕೊಳ್ಳಿ ಎಂದು ಕೇಳಿಕೊಳ್ಳುತೇವೆ. ವಿವಾಹ ವೇದಿಕೆಯ ಏಳಿಗೆಗಾಗಿ ಸಹಕರಿಸಿರುವ ನಿಮ್ಮೆಲ್ಲರಿಗೂ ವಂದನೆಗಳು.
.
ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಆರಂಭವಾದ ಟ್ರಸ್ಟ್ ಇದೀಗ ಸಮಾಜದ ಭಾಂದವರಲ್ಲಿ ಸಂಘಟನೆಯ ಕಲ್ಪನೆಯನ್ನು ಮೂಡಿಸಿ ಆರ್ಥಿಕ ಸದೃಢತೆ ಸಾದಿಸುವ ನಿಟ್ಟಿನಲ್ಲಿ ಪ್ರಸ್ತುತ ತಾಲೂಕಿನಲ್ಲಿ 1012 ರಚನೆಯೊಂದಿಗೆ 10,226 ಸದಸ್ಯರನ್ನು ಹೊಂದಿದ್ದು ರೂ . 5 ಕೋಟಿಗೂ ಮಿಕ್ಕಿ ವ್ಯವಹಾರ ನಡೆದಿರುತ್ತದೆ.