Previous slide
Next slide

ಆತ್ಮೀಯರಿಗೆ

ಪುತ್ತೂರಿನ ಒಕ್ಕಲಿಗ
ಸ್ವ-ಸಹಾಯ ಸಂಘಕ್ಕೆ
ಸುಸ್ವಾಗತ

ಟ್ರಸ್ಟ್ ನ ಮುಖಾಂತರ ಸಹಕಾರ, ಸಂಘಟನೆ, ಸಂಸ್ಕಾರ, ಸಮೃದ್ಧಿ ಎಂಬ ಸದುದ್ದೇಶ . ಸಮಾಜದ ಸರ್ವತ್ತೊಮುಖ ಅಭಿವೃದ್ಧಿಯ ಆಶಯದೊಂದಿಗೆ ಟ್ರಸ್ಟ್ ಎಲ್ಲರಿಗಾಗಿ ಎಲ್ಲರೂ ಒಬ್ಬನಿಗಾಗಿ ಎಂಬ ಧೇಯ ವಾಕ್ಯದಂತೆ ತಳಮಟ್ಟದ ಸ್ವಜಾತಿ ಭಾಂಧವರನ್ನು ಬಲಪಡಿಸುವುದು ಟ್ರಸ್ಟ್ ನ ಆಶಯ.

ಅನುಗ್ರಹ ಸಂದೇಶ

ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠ, ಮಂಗಳೂರು.

ಸಮಾಜಸೇವೆ ಮಾಡುವುದಕ್ಕೆ ಅನೇಕಾನೇಕ ಮಾರ್ಗಗಳಿವೆ. ಜನಸೇವೆಯೇ ಜನಾರ್ದನ ಸೇವೆ. ಸೇವೆಯೇ ಪೂಜೆ ಎಂಬ ಅನ್ವರ್ಥಕ್ಕೆ ಸರಿಯಾಗಿ ಪುತ್ತೂರು ತಾಲೂಕಿನ ಒಕ್ಕಲಿಗರ ಸ್ವ – ಸಹಾಯ ಟ್ರಸ್ಟ್ ವತಿಯಿಂದ ಆಗುತ್ತಿರುವ ಜನಪರ ಸೇವೆ ಅನನ್ಯ , ಅಪಾರ. ಅಪ್ರತಿಮ ಸಾಧನೆಯೆಂಬಂತೆ ಕಾರ್ಯನಿರ್ವಹಿಸುತ್ತಾ ನೊಂದ ಬಡವರ ಕಣ್ಣೀರು ಒರೆಸುವ ಕಾರ್ಯ ಮಾಡುತ್ತಿದ್ದು ಜನಮನ್ನಣೆ ಪಡೆದಿರುವುದು ಅಪಾರ ಸಂತಸವನ್ನುಟುಮಾಡಿದೆ. ಹತ್ತು ವರ್ಷಗಳಲ್ಲಿ 1,000 ಗುಂಪುಗಳನ್ನೊಳಗೊಂಡಂತೆ 10,000 ಸದಸ್ಯರನ್ನು ಹೊಂದಿರುವುದು ಪ್ರಗತಿಗೆ ಹಿಡಿದ ಕನ್ನಡಿ. ಮುಂದಿನ ದಿನಗಳಲ್ಲಿ ಟ್ರಸ್ಟ್ ಇನ್ನೂ ಉತ್ತರಿಟ್ಟರ ಅಭಿವೃದ್ಧಿ ಹೊಂದಲಿ ಹರಿದು ಹಂಚಿರುವ ಮನೆ ಮನಗಳನ್ನು ಸಾಮರಸ್ಯದಿಂದ ಬೆಸೆಯುತ್ತಿರುವ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಆರೋಗ್ಯ ಸೇವೆ ವಿದ್ಯಾರ್ಥಿ ವೇತನ ಮುಂತಾದ ಕಾರ್ಯಗಳು ಟ್ರಸ್ಟ್ ವತಿಯಿಂದ ನಡೆಯುತ್ತಿರುವುದು ಶ್ಲಾಘನೀಯ ಟ್ರಸ್ಟ್ ಇನ್ನಷ್ಟು ಅಭಿವೃದ್ಧಿ ಹೊಂದಲಿ ಎಂದು ಶ್ರೀ ಕ್ಷೇತ್ರದ ಆರಾಧ್ಯ ದೇವರಾದ ಶ್ರೀ ಕಾ ಬೈರವೇಶ್ವರ ಸ್ವಾಮಿ ಹಾಗೂ ಶ್ರೀ ಗುರುಗಳು ಅನುಗ್ರಹಿಸಲಿ ಎಂದು ಆಶಿಸುತ್ತೇನೆ .

ಸಂಘಗಳಿಂದ ಸಂಘಟನೆ ಬಹಳ ಸುಲಭವೆಂದು ಅರಿತು ಗೌಡ ಸಮಾಜದ ಬಾಂಧವರನ್ನು ಒಗ್ಗೂಡಿಸಿ ಆರ್ಥಿಕ ಸ್ವಾವಲಂಭನೆ ಆತ್ಮವಿಶ್ವಾಸ ಸಾದಿಸುವ ಉದ್ದೇಶವನ್ನಿಟ್ಟುಕೊಂಡು ರಚನೆಯಾದ ಟ್ರಸ್ಟ್ ಗೆ 2013 ರ  ದಶಂಬರ್ ನಲ್ಲಿ ಕೇಂದ್ರ ಸಚಿವರಾದ ಸನ್ಮಾನ್ಯ ಡಿ. ವಿ ಸದಾನಂದ ಗೌಡ ರವರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ್ನು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಆರಂಭವಾದ ಟ್ರಸ್ಟ್ ಇದೀಗ ಸಮಾಜದ ಭಾಂದವರಲ್ಲಿ ಸಂಘಟನೆಯ ಕಲ್ಪನೆಯನ್ನು ಮೂಡಿಸಿ ಆರ್ಥಿಕ ಸದೃಢತೆ ಸಾದಿಸುವ ನಿಟ್ಟಿನಲ್ಲಿ ಪ್ರಸ್ತುತ ತಾಲೂಕಿನಲ್ಲಿ 1012 ರಚನೆಯೊಂದಿಗೆ  10,226 ಸದಸ್ಯರನ್ನು ಹೊಂದಿದ್ದು ರೂ . 5 ಕೋಟಿಗೂ ಮಿಕ್ಕಿ ವ್ಯವಹಾರ ನಡೆದಿರುತ್ತದೆ.

ಸಮಾಜದ ಸರ್ವರ ಸಹಕಾರದೊಂದಿಗೆ ಹಲವಾರು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕಾರ್ಯಗಳಲ್ಲಿ ಟ್ರಸ್ಟ್ ತೊಡಗಿಸಿಕೊಂಡಿದ್ದು ರಕ್ತದಾನ ಶಿಬಿರ, ಗ್ರಾಮೋತ್ಸವ ಕಾರ್ಯಕ್ರಮ , ಆಟಿದ ಕೂಟ ಕಾರ್ಯಕ್ರಮ, ಕ್ಷೇತ್ರ ದರ್ಶನ ಪ್ರವಾಸ, ಅಧ್ಯಯನ ಪ್ರವಾಸ, ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವುದು, ಯೋಗ ತರಬೇತಿ ಕಾರ್ಯಾಗಾರ , ಸಂಘದ ಸದಸ್ಯರ ಮಕ್ಕಳಿಗೆ ಶಿಕ್ಷಣಕ್ಕೆ ಅಗತ್ಯವಾದ ಪುಸ್ತಕಗಳನ್ನು ಟ್ರಸ್ಟ್ ನ ಮುಖಾಂತರ ಒದಗಿಸಿಕೊಡುವುದು. ನಮ್ಮ ಸಂಘದ ಸದಸ್ಯರು ತೀರಿಕೊಂಡಲ್ಲಿ ಅವರ ಕುಟುಂಬದವರಿಗೆ, ಮತ್ತು ಅನಾರೋಗ್ಯ ದ ಸಮಸ್ಯೆ ಇರುವ ಸದಸ್ಯರಿಗೆ ಸಹಾಯ ಧನದ ಮೂಲಕ ನೆರವಾಗುತಿದ್ದೇವೆ. ದೇಶಸೇವೆ ಮಾಡಿದ ನಮ್ಮ ಒಕ್ಕಲಿಗ ಸಮಾಜದ ಯೋಧರನ್ನು ಗುರುತಿಸಿ ಅವರಿಗೆ ಸನ್ಮಾನ ವನ್ನು ಮಾಡಲಾಗುತ್ತಿದೆ. ಜೇನು ಸಾಕಣೆ ತರಬೇತಿ ಹಾಗೂ ಕೃಷಿಯೇತರ ಚಟುವಟಿಕೆಗಳಂತಹ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬಂದಿರುತ್ತೇವೆ.

ಪುತ್ತೂರು ತಾಲೂಕಿನಲ್ಲಿ ಒಟ್ಟು 8 ವಲಯಗಳಿದ್ದು, ಒಟ್ಟು 62 ಒಕ್ಕೂಟ  ಆಗಿದ್ದು ಪ್ರತಿ ವಲಯದಲ್ಲಿ ಒಂದು ಗ್ರಾಮವನ್ನು ಮಾದರಿ ಗ್ರಾಮವೆಂದು ಆಯ್ಕೆ ಮಾಡಿ ಆ ಗ್ರಾಮದಲ್ಲಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಕುಂಬ್ರ ವಲಯದ ಮಾಡ್ನೂರು ಗ್ರಾಮವನ್ನು ಪ್ರಾಯೋಗಿಕವಾಗಿ ಮಾದರಿ ಗ್ರಾಮವಾಗಿ ಆಯ್ಕೆ ಮಾಡಲಾಗಿದ್ದುವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಯಶಸ್ವಿಯಾಗಿದ್ದೇವೆ.

ಪ್ರಸ್ತುತ ಬಲ್ನಾಡು ಗ್ರಾಮವನ್ನು ಮಾದರಿ ಗ್ರಾಮವಾಗಿ ಆಯ್ಕೆ ಮಾಡಿದ್ದು ಅಲ್ಲಿಯೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯ ಪಥದಲ್ಲಿ ಸಾಗುತಿದ್ದೇವೆ.

ಜನರಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸಲು ಸಹಕಾರವಾಗುವಂತಹ ಭಜನಾ  ಕಾರ್ಯಕ್ರಮಗಳನ್ನು ಗ್ರಾಮ ಗ್ರಾಮಗಳಲ್ಲಿ ಹಮ್ಮಿಕೊಳ್ಳುತಿದ್ದೇವೆ.  ಪ್ರಸ್ತುತ ಮಾದರಿ ಗ್ರಾಮವಾದ ಬಲ್ನಾಡಿನಲ್ಲಿ ಪ್ರತೀ ಶನಿವಾರ ಆ ಗ್ರಾಮದ ವಿವಿಧ ಮನೆಗಳಲ್ಲಿ ಭಜನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ 2 ವರ್ಷಗಳಿಂದ ನಡೆಸಿಕೊಂಡು ಬಂದಿರುತ್ತೇವೆ.  

Get In Touch
Find Us
Follow Us

Send us a message

ssss

ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ ದಶಮಾನೋತ್ಸವದ ಆಮಂತ್ರಣ ಪತ್ರಿಕೆ.