ಟ್ರಸ್ಟ್ ನ ಹುಟ್ಟು
ಸಂಘಗಳಿಂದ ಸಂಘಟನೆ ಬಹಳ ಸುಲಭವೆಂದು ಅರಿತು ಗೌಡ ಸಮಾಜದ ಬಾಂಧವರನ್ನು ಒಗ್ಗೂಡಿಸಿ ಆರ್ಥಿಕ ಸ್ವಾವಲಂಭನೆ ಆತ್ಮವಿಶ್ವಾಸ ಸಾದಿಸುವ ಉದ್ದೇಶವನ್ನಿಟ್ಟುಕೊಂಡು ರಚನೆಯಾದ ಟ್ರಸ್ಟ್ ಗೆ 2013 ರ ದಶಂಬರ್ ನಲ್ಲಿ ಕೇಂದ್ರ ಸಚಿವರಾದ ಸನ್ಮಾನ್ಯ ಡಿ. ವಿ ಸದಾನಂದ ಗೌಡ ರವರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ನ್ನು ತಮ್ಮ ದಿವ್ಯ ಹಸ್ತದಿಂದ ಉದ್ಘಾಟಿಸಿದರು. ಯುವ ಒಕ್ಕಲಿಗ ಗೌಡ ಸೇವಾ ಸಂಘ ಪುತ್ತೂರು ಇದರ ಪ್ರಾಯೋಜಕತ್ವದಲ್ಲಿ ಆರಂಭವಾದ ಟ್ರಸ್ಟ್ ಇದೀಗ ಸಮಾಜದ ಭಾಂದವರಲ್ಲಿ ಸಂಘಟನೆಯ ಕಲ್ಪನೆಯನ್ನು ಮೂಡಿಸಿ ಆರ್ಥಿಕ ಸದೃಢತೆ ಸಾದಿಸುವ ನಿಟ್ಟಿನಲ್ಲಿ ಪ್ರಸ್ತುತ ತಾಲೂಕಿನಲ್ಲಿ 1012 ರಚನೆಯೊಂದಿಗೆ 10,226 ಸದಸ್ಯರನ್ನು ಹೊಂದಿದ್ದು ರೂ . 5 ಕೋಟಿಗೂ ಮಿಕ್ಕಿ ವ್ಯವಹಾರ ನಡೆದಿರುತ್ತದೆ.
ಸ್ಥಾಪಕಾಧ್ಯಕ್ಷರ ಮಾತು
ಟ್ರಸ್ಟ್ ನ ಮುಖಾಂತರ ಸಹಕಾರ, ಸಂಘಟನೆ, ಸಂಸ್ಕಾರ, ಸಮೃದ್ಧಿ ಎಂಬ ಸದುದ್ದೇಶ . ಸಮಾಜದ ಸರ್ವತ್ತೊಮುಖ ಅಭಿವೃದ್ಧಿಯ ಆಶಯದೊಂದಿಗೆ ಟ್ರಸ್ಟ್ ಎಲ್ಲರಿಗಾಗಿ ಎಲ್ಲರೂ ಒಬ್ಬನಿಗಾಗಿ ಎಂಬ ಧೇಯ ವಾಕ್ಯದಂತೆ ತಳಮಟ್ಟದ ಸ್ವಜಾತಿ ಭಾಂಧವರನ್ನು ಬಲಪಡಿಸುವುದು ಟ್ರಸ್ಟ್ ನ ಆಶಯ. ಪುತ್ತೂರು ತಾಲೂಕಿನ 60 ಗ್ರಾಮಗಳಲ್ಲಿ ಈಗಾಗಲೇ 62 ಒಕ್ಕೂಟ ರಚನೆಯಾಗಿದ್ದು ಮುಂದಿನ ದಿನಗಳಲ್ಲಿ ತಾಲೂಕಿನಾದ್ಯಂತ ಗುಂಪುಗಳನ್ನು ವಿಸ್ತರಿಸುವ ಉದ್ದೇಶವಿದೆ .