ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮಕ್ಕೆ ಧನ ಸಹಾಯ ಕೋರಿಕೆ.

ಒಕ್ಕಲಿಗ ಸ್ವ-ಸಹಾಯ ಟ್ರಸ್ಟ್(ರಿ.) ಪುತ್ತೂರು ಸ್ಥಾಪಕಾಧ್ಯಕ್ಷರಾದ ಎ.ವಿ. ನಾರಾಯಣ ಗೌಡ ಇವರ ನೇತೃತ್ವದಲ್ಲಿ 2013ರಲ್ಲಿ ಅಂದಿನ ಕೇಂದ್ರ ಸಚಿವರಾದ ಶ್ರೀ ಡಿ.ವಿ. ಸದಾನಂದ ಗೌಡ ಇವರಿಂದ ಉದ್ಘಾಟಿಸಲ್ಪಟ್ಟು 10 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ, ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಪ್ರಗತಿ ಪಥದಲ್ಲಿ ಮುನ್ನಡೆದು ಪ್ರಕೃತ ದಶ ಸಂಭ್ರಮದ ಹೊಸ್ತಿಲಲ್ಲಿದೆ. 5 ತಾಲೂಕಿನ 64 ಗ್ರಾಮದಲ್ಲಿ 66 ಒಕ್ಕೂಟಗಳಿವೆ. ಸುಮಾರು 1 ಸಾವಿರ ಸಂಘಗಳಿದ್ದು 1೦ ಸಾವಿರಕ್ಕೂ ಮಿಕ್ಕಿದ ಸದಸ್ಯರಿದ್ದಾರೆ. ರೂಪಾಯಿ 5 ಕೋಟಿಗೂ ಮಿಕ್ಕಿದ ವ್ಯವಹಾರವಿದ್ದು ಲಾಭಾಂಶ ವಿತರಣೆ ಮಾಡುತ್ತಿದ್ದೇವೆ.
ದಶಮಾನೋತ್ಸವದ ಸವಿನೆನಪಿಗಾಗಿ ಸಭಾಭವನ ನಿರ್ಮಾಣ, ಸ್ಮರಣ ಸಂಚಿಕೆ, ಸಾಧಕರಿಗೆ ಸನ್ಮಾನವಿದ್ದು ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದರೊಂದಿಗೆ ದಾಂಪತ್ಯ ಜೀವನದಲ್ಲಿ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತೇವೆ. ಸುಮಾರು 50 ಲಕ್ಷ ರೂಪಾಯಿ ಅಂದಾಜು ವೆಚ್ಚ ತಗಲಬಹುದಾಗಿದೆ. ನಮ್ಮ ಸಮಾಜದ ಅಭ್ಯುದಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ತಾವು ಈ ಮಹತ್ಕಾರ್ಯಕ್ಕೆ ಉದಾರ ಧನ ಸಹಾಯವನ್ನು ನೀಡಿ ಸಹಕರಿಸಬೇಕಾಗಿ ತಮ್ಮಲ್ಲಿ ವಿನಯಪೂರ್ವಕ ವಿಜ್ಞಾಪನೆಗಳು.

BANK OF BARODA Bank account details

Account Name :OKKALIGA SWA SAHAYA TRUST (R) PUTTUR

Account Type : Savings

AccountAccount Number : 83740100000415

IFSC Code : BARB0VJPUDA

Bank Name : BANK OF BARODA

Branch Name : PUTTUR MAIN